Untitled Document
Sign Up | Login    
Dynamic website and Portals
  

Related News

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷೆ ಬಹಿರಂಗ

2017ರಲ್ಲಿ ನಡೆಯಲಿರುವ ಬಹುನಿರೀಕ್ಷಿತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ಎಬಿಪಿ ನ್ಯೂಸ್‌- ಸಿಸೆರೋ ಉತ್ತರ ಪ್ರದೇಶದ 10 ಕ್ಷೇತ್ರಗಳ ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿದ್ದು, ಅದರಂತೆ ಶೇ.32 ರಷ್ಟು...

ಗೋರಖ್​ಪುರ್ ದಲ್ಲಿ ಏಮ್ಸ್ ಗೆ ಪ್ರಧಾನಿ ಮೋದಿ ಶಿಲಾನ್ಯಾಸ

ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದರು. ಇದಕ್ಕೂ ಮೊದಲು ಗೋರಖ್​ಪುರ ಗೋರಖ್​ನಾಥ ಮಂದಿರದಲ್ಲಿ ನಿರ್ಮಿಸಿರುವ ಮಹಾಂತ ಅವೈದ್​ನಾಥ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಅಡಿಗಲ್ಲು ಸಮಾರಂಭದಲ್ಲಿ ನೆರೆದಿದ್ದ ಅಪಾರ...

ಉತ್ತರ ಪ್ರದೇಶದ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರನ್ನು ಅಧಿಕೃತವಾಗಿ ಘೊಷಿಸಿದೆ. ಕಾಂಗ್ರೆಸ್ಸಿನಲ್ಲಿ ಸಿಎಂ ಅಭ್ಯರ್ಥಿಯನ್ನು ಘೋಷಿಸುವ ಪರಿಪಾಠ ಇಲ್ಲದಿದ್ದರೂ, ಇದೇ ಮೊದಲ ಬಾರಿಗೆ...

ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಜ್ ಬಬ್ಬರ್ ನೇಮಕ

ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನಟ, ಮಾಜಿ ಸಂಸದ ರಾಜ್‌ ಬಬ್ಬರ್‌ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಅವರಿಗೆ ಪಕ್ಷದಲ್ಲಿ ಮಹತ್ವದ ಹುದ್ದೆ ನೀಡುವ ನಿರೀಕ್ಷೆ ಹುಸಿಯಾಗಿದೆ. ಉತ್ತರಪ್ರದೇಶ ಕಾಂಗ್ರೆಸ್ ಘಟಕದ...

ಉತ್ತರ ಪ್ರದೆಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಂತ್ರ: ಪ್ರಿಯಾಂಕಾಗೆ ಪ್ರಚಾರ ಉಸ್ತುವಾರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದ್ದು, ಪ್ರಿಯಾಂಕಾ ವಾದ್ರಾರಿಗೆ ಪ್ರಚಾರ ಉಸ್ತುವಾರಿ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈವರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷೇತ್ರ ರಾಯ್ ಬರೇಲಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಷೇತ್ರ ಅಮೇಠಿಯಲ್ಲಿನ...

ಬಿಜೆಪಿ ಕಾರ್ಯಕರ್ತರಿಗೆ ಸಪ್ತಸೂತ್ರಗಳನ್ನು ಬೋಧಿಸಿದ ಪ್ರಧಾನಿ ಮೋದಿ

ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಸಪ್ತಸೂತ್ರಗಳನ್ನು ಬೋಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಕ್ತಾಯಗೊಂಡ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಸೂತ್ರಗಳ ಮೋದಿ ಬೋಧಿಸಿದ್ದಾರೆ. ಸೇವಾ ಭಾವನೆ, ಸಂತುಲನ, ಸಂಯಮ, ಸಮನ್ವಯ, ಸಕಾರಾತ್ಮಕತೆ, ಸದ್ಭಾವನೆ ಮತ್ತು ಸಂವಾದ.. ಇವು ಸಪ್ತಸೂತ್ರಗಳಾಗಿದ್ದು. ಇದು ರ್ಯಕರ್ತರ ಗುಣ-ನಡತೆ,...

ಅಲಹಾಬಾದ್​ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಉತ್ತರ ಪ್ರದೇಶ ವಿಧಾನಸಭೆಯ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಇಂದಿನಿಂದ ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಅಲಹಾಬಾದ್ ನಲ್ಲಿ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೂ ಭಾಗವಹಿಸುವ ಈ ಸಭೆಯಲ್ಲಿ ಉತ್ತರಪ್ರದೇಶ...

ಉತ್ತರ ಪ್ರದೇಶದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ

2017ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭಗೊಂಡಿದೆ. ಅಲಹಾಬಾದ್ ನಲ್ಲಿ ಆರಂಭಗೋಂಡಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರು, ಬಿಜೆಪಿ...

ಮಥುರಾದಲ್ಲಿ ಭೂ ಒತ್ತುವರಿ ತೆರವು ವೇಳೆ ಘರ್ಷಣೆ: 200 ಮಂದಿ ಬಂಧನ

ಉತ್ತರ ಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು 200 ಮಂದಿಯನ್ನು ಬಂಧಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿದ್ದ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸಂತ್ಯಾಗ್ರಹಿ ಸಂಘಟನೆಯ...

ಆತ್ಮರಕ್ಷಣಾ ತರಬೇತಿ ಸಾಮಾಜಿಕ ಹೊಣೆಗಾರಿಕೆ: ತೊಗಾಡಿಯಾ

ಆತ್ಮರಕ್ಷಣೆ ತರಬೇತಿ ಸಂವಿಧಾನ ವಿರೋಧಿಯಲ್ಲ, ಇದು ಸಾಮಾಜಿಕ ಹೊಣೆಗಾರಿಕೆ ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಉತ್ತರ ಪ್ರದೇಶದ 12ನೇ ಸೆಕ್ಟಾರ್​ನ ಸರಸ್ವತಿ ಶಿಶು ಮಂದಿರದ ಆವರಣದಲ್ಲಿ ಭಜರಂಗದಳ ಆಯೋಜಿಸಿರುವ ಶಿಬಿರದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಮ್ಮನ್ನು...

ದೇಶ ಬದಲಾಗುತ್ತಿದೆ ಆದರೆ ಕೆಲವರ ಮನಸ್ಥಿತಿ ಮಾತ್ರ ಬದಲಾಗಿಲ್ಲ: ಪ್ರಧಾನಿ ನರೇಂದ್ರ ಮೋದಿ

ದೇಶ ಬದಲಾಗುತ್ತಿದೆ. ಆದರೆ ಕೆಲವರ ಮನಸ್ಥಿತಿ ಮಾತ್ರ ಬದಲಾಗಿಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕೇಂದ್ರ ಎನ್.ಡಿ.ಎ ಸರ್ಕಾರ 2 ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಸಾರ್ವಜನಿಕ ಸಮಾರಂಭವನ್ನು...

ಉತ್ತರ ಪ್ರದೇಶದಲ್ಲಿ ಬರ ಪರಿಸ್ಥಿತಿ: ತುರ್ತು ನೆರವಿಗೆ ಪ್ರಧಾನಿ ನಿರ್ದೇಶನ

ಉತ್ತರ ಪ್ರದೇಶದ ಬರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜೊತೆಗೆ ಪರಾಮರ್ಶಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸಲ್ಲಿಸಿದ ಮನವಿಗೆ ಅನುಗುಣವಾಗಿ ತಕ್ಷಣವೇ ಅಗತ್ಯ ನೆರವಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ನೀರಿನ ಅಭಾವ ಸೇರಿದಂತೆ ವಿವಿಧ ವಿಚಾರಗಳನ್ನು...

ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರುವ ಕಾರ್ಮಿಕರಿಗೆ ದೇಶದ ನಂಬರ್ ಒನ್ ಕಾರ್ಮಿಕನ ಶುಭಾಷಯಗಳುಃ ಪ್ರಧಾನಿ ಮೋದಿ

ಉತ್ತರ ಪ್ರದೇಶದ ಬಲಿಯಾದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಪ್ರಧಾನಿ ನರೇಂದ ಮೋದಿ ಚಾಲನೆ ನೀಡಿದರು. ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಕಾರ್ಮಿಕ ದಿನವಾದ ಇಂದು ಕಠಿಣ ಪರಿಶ್ರಮದಿಂದ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರುವ...

ಉತ್ತರ ಪ್ರದೇಶದಲ್ಲಿ ಎನ್.ಐ.ಎ ಅಧಿಕಾರಿಯ ಬರ್ಬರ ಹತ್ಯೆ

ಉತ್ತರ ಪ್ರದೇಶದ ಬಿಜ್‌ ನೂರ್‌ನಲ್ಲಿ ಬೈಕ್‌ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಡೆಪ್ಯುಟಿ ಎಸ್‌.ಪಿ ಮಹಮದ್‌ ತಂಝಿಲ್‌ ಎನ್ನುವವರು ಹತ್ಯೆಗೀಡಾಗಿದ್ದು , ತಡ ರಾತ್ರಿ 1.30 ರ ವೇಳೆಗೆ ಪತ್ನಿ ಮತ್ತು ಇಬ್ಬರು...

ಸೌಹಾರ್ದತೆ ಕೆಡಿಸುವವರ ವಿರುದ್ಧದ ಪ್ರಬಲ ಕ್ರಮ : ರಾಜನಾಥ್ ಸಿಂಗ್

ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ತಿಂದರೆಂಬ ವದಂತಿಯಿಂದ ಆಕ್ರೋಶಿತರಾದ ಗುಂಪೊಂದು ಒಬ್ಬ ವ್ಯಕ್ತಿಯನ್ನು ಸಾಯಿಸಿದ ಕೆಲವು ದಿನದ ನಂತರ ಬುಧವಾರ ಮಾತನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸುವವರ ವಿರುದ್ಧ ಸಾಧ್ಯವಿರುವ ಅತ್ಯಂತ...

ಅಯೋಧ್ಯಾ ರಾಮ ಜನ್ಮಭೂಮಿ ಯಾತ್ರಾರ್ಥಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಿ: ಸುಪ್ರೀಂ

ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ ಸ್ಥಳಕ್ಕೆ ಆಗಮಿಸುವ ಯಾತ್ರಿಗಳಿಗೆ ಸಾಧ್ಯವಾದಷ್ಟು ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಆದೇಶ ನೀಡಿದೆ. ಏನಾದರೂ ಮಾಡೋಣ, ಸಾಧ್ಯವಾದರೆ ಸ್ಥಳದ ದುರಸ್ತಿ ಮಾಡಿ ಮತ್ತು ಅಲ್ಲಿನ ಪ್ರವಾಸಿಗರಿಗೆ...

ಮಧ್ಯಪ್ರದೇಶದಲ್ಲಿ ಪತ್ರಕರ್ತನ ಹತ್ಯೆ: ಮೂವರ ಬಂಧನ

ಉತ್ತರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಪತ್ರಕರ್ತ ಜೋಗಿಂದರ್ ಸಿಂಗ್‌ ರನ್ನು ಸಜೀವವಾಗಿ ಸುಟ್ಟ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತನ ಸಜೀವ ದಹನವು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಬಲಾಘಾಟ್ ಜಿಲ್ಲೆಯ ಕಟಾಂಗಿ ನಿವಾಸಿಯಾದ 44 ವರ್ಷದ ಸಂದೀಪ್ ಕೊತಾರಿ...

ಪತ್ರಕರ್ತನ ದಹನ ಪ್ರಕರಣ: ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್

ಶಹಜಹಾನ್ ಪುರ್ ಮೂಲದ ಪತ್ರಕರ್ತ ಜಗೇಂದ್ರ ಸಿಂಗ್ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪತ್ರಕರ್ತ ಸಿಂಗ್ ಹತ್ಯೆ ಪ್ರಕರಣದ ಬಗ್ಗೆ ಸಲ್ಲಿಸಿದ್ದ ಸಾರ್ವಜನಿಕ...

ಸಲ್ಮಾನ್ ಖಾನ್ ಮುಸ್ಲಿಮರಾಗಿರುವುದರಿಂದ ಜಾಮೀನು ದೊರೆತಿದೆ: ಸಾಧ್ವಿ ಪ್ರಾಚಿ

ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಬಿಜೆಪಿ ನಾಯಕರು ನೀಡುವ ಅನವಶ್ಯಕ ಹೇಳಿಕೆಗಳಿಗೆ ಕಡಿವಾಣ ಬೀಳುವ ಲಕ್ಷಣ ಕಾಣುತ್ತಿಲ್ಲ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಜಾಮೀನು ದೊರೆತಿರುವುದಕ್ಕೆ ಸಹಜವಾಗಿಯೇ ದೇಶಾದ್ಯಂತ...

ಇಸ್ಲಾಮ್ ಪರ ರ್ಯಾಲಿ ನಡೆಸಲು ಮುಸ್ಲಿಮ್ ಮೌಲ್ವಿ ಮಹಮೂದ್ ಮದನಿಗೆ ಫತ್ವಾ

'ಇಸ್ಲಾಮ್' ನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬೃಹತ್ ರ್ಯಾಲಿ ನಡೆಸಬೇಕೆಂದು ದಾರುಲ್ ಉಲೂಮ್ ಸಂಘಟನೆ ಪ್ರಮುಖ ಮುಸ್ಲಿಮ್ ಮೌಲ್ವಿ, ಮಾಜಿ ಸಂಸದ ಮಹಮೂದ್ ಮದನಿಗೆ ಫತ್ವಾ ಹೊರಡಿಸಿದೆ. ಜಮೀಯತ್ ಉಲೆಮ-ಇ-ಹಿಂದ್ ಸಂಘಟನೆಯ ಮುಖ್ಯಸ್ಥರಾಗಿರುವ ಮಹಮೂದ್ ಮದನಿಗೆ ದೇಶಾದ್ಯಂತ ಹಿಂಬಾಲಕರಿದ್ದು, ನರೇಂದ್ರ ಮೋದಿ ಆಡಳಿತದಲ್ಲಿ...

ಬಿಜೆಪಿ ಸೇರಿದ ಬಿ.ಎಸ್.ಪಿ ನಾಯಕ ದೀನನಾಥ್ ಭಾಸ್ಕರ್

ಬಹುಜನ ಸಮಾಜ ಪಕ್ಷ(ಬಿ.ಎಸ್.ಪಿ) ಮುಖಂಡ ಹಾಗೂ ಸ್ಥಾಪಕ ಸದಸ್ಯ ದೀನನಾಥ್ ಭಾಸ್ಕರ್ ತಮ್ಮ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮೇ.4ರಂದು ಈ ಬಗ್ಗೆ ಹೇಳಿಕೆ ನೀಡಿರುವ ದೀನನಾಥ್ ಭಾಸ್ಕರ್, ತಾವು ಬಿಜೆಪಿ ಸದಸ್ಯತ್ವ ಪಡೆದಿದ್ದು, ಮೇ.14ರಂದು ಉತ್ತರ ಪ್ರದೇಶ...

ಭೂಕಂಪದಿಂದ ಅಸ್ತವ್ಯಸ್ಥ: ಭಾರತ-ನೇಪಾಳದ ಗಡಿಯಲ್ಲಿ ಉಗ್ರರು ನುಸುಳುವ ಸಾಧ್ಯತೆ

'ನೇಪಾಳ'ದಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಣಾಮವಾಗಿ ಉಂಟಾದ ಅವ್ಯವಸ್ಥೆಯಿಂದಾಗಿ ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಉತ್ತರ ಪ್ರದೇಶಕ್ಕೆ ಎಚ್ಚರಿಕೆ ರವಾನಿಸಿರುವ ಗುಪ್ತಚರ ಇಲಾಖೆ ಉಗ್ರರ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದೆ....

ಮನೆಗಳನ್ನು ಉಳಿಸಿಕೊಳ್ಳಲು ಇಸ್ಲಾಮ್ ಗೆ ಮತಾಂತರವಾದ ವಾಲ್ಮೀಕಿಗಳು!

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ವಿರುದ್ಧವಾಗಿ ಧ್ವನಿ ಎತ್ತಿದ್ದ ಆಜಂ ಖಾನ್ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಬರೊಬ್ಬರಿ 800 ಜನರು ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ. ತಮ್ಮ ಮನೆಗಳು ನಿರ್ನಾಮಗೊಳ್ಳುವುದನ್ನು ತಡೆಯಲು ವಾಲ್ಮೀಕಿ ಜನಾಂಗದವರು ಬೇರೆ ದಾರಿ ಇಲ್ಲದೇ ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ...

ಎಸ್.ಪಿಯಲ್ಲಿರುವ ಭ್ರಷ್ಟರ ವಿರುದ್ಧ ಮುಲಾಯಂ ಸಿಂಗ್ ಕ್ರಮ ಕೈಗೊಳ್ಳಲಿ: ಬಿಜೆಪಿ

ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ನಡೆಸುತ್ತಿರುವ ಆರೋಪ ಮಾಡಿದ್ದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಗೆ ಬಿಜೆಪಿ ಸವಾಲು ಹಾಕಿದ್ದು ಸಮಾಜವಾದಿ ಪಕ್ಷದಲ್ಲಿರುವ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದೆ. ಜನಸಾಮಾನ್ಯರನ್ನು ನಿರ್ಲಕ್ಷಿಸುತ್ತಿರುವ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು...

ಬಿಜೆಪಿ ನಕಲಿ ರಾಮಭಕ್ತರ ಪಕ್ಷ: ಶಿವಸೇನೆ

ಬಿಜೆಪಿ ನಕಲಿ ರಾಮ ಭಕ್ತರ ಪಕ್ಷವಾಗಿದೆ ಎಂದು ಆರೋಪ ಮಾಡಿರುವ ಶಿವಸೇನೆಯು 2017ರಲ್ಲಿ ನಡೆಯವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎಲ್ಲ 403 ಸ್ಥಾನಗಳಿಗೂ ತಾನು ಸ್ಫರ್ಧಿಸುವುದಾಗಿ ಹೇಳಿದೆ. ಕಾನ್ಪುರದ ಕಿದ್ವಾಯಿ ನಗರದಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಸೇನೆಯ ಉತ್ತರ...

ಪ್ರಧಾನಿಯನ್ನು ಭೇಟಿ ಮಾಡಿದ ಮುಸ್ಲಿಮ್ ನಾಯಕರ ನಿಯೋಗ: ಭಯೋತ್ಪಾದನೆ ಬಗ್ಗೆ ಚರ್ಚೆ

'ಮುಸ್ಲಿಮ್ ಸಮುದಾಯ'ದ ನಾಯಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಭಯೋತ್ಪಾದನೆ ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ತೀವ್ರಗಾಮಿತನದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ಹಾಗೂ ಯುವಕರಲ್ಲಿ ಕಂಡುಬರುತ್ತಿರುವ ಭಯೋತ್ಪಾದಕ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಸ್ಲಿಮ್ ಸಮುದಾಯದ ನಾಯಕರ...

ಉತ್ತರ ಪ್ರದೇಶದಲ್ಲಿ ಪ್ರಬಲ ಸುಂಟರಗಾಳಿ: 14 ಬಲಿ

ಉತ್ತರ ಪ್ರದೇಶದ ಹಲವೆಡೆ ಕಳೆದೆರಡು ದಿನಗಳಿಂದ ಪ್ರಬಲವಾದ ಸುಂಟರಗಾಳಿ ಬೀಸುತ್ತಿದ್ದು, ಶನಿವಾರ ಮಧ್ಯಾಹ್ನದವರೆಗೆ 14 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಲಖ್ನೌ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಂಟರಗಾಳಿ ತೀವ್ರವಾಗಿದ್ದು 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ 8 ಮಂದಿ ಜೀವ ಕಳೆದುಕೊಂಡಿದ್ದಾರೆ....

ಬಿಜೆಪಿ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿರುವ ರಾಜಕೀಯ ಪಕ್ಷ

'ಸದಸ್ಯತ್ವ ನೋಂದಣಿ' ಅಭಿಯಾನವನ್ನು ಯಶಸ್ವಿಗೊಳಿಸಿರುವ ಬಿಜೆಪಿ, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರೆಗೂ 8.6ಕೋಟಿ ಸದಸ್ಯತ್ವ ಹೊಂದಿದ್ದ ಚೀನಾದ ಕಮ್ಯುನಿಷ್ಟ್ ಪಕ್ಷ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿತ್ತು. ಇದೀಗ 8.8 ಕೋಟಿ ಸದಸ್ಯತ್ವ...

ಹೊಸ ಮಾವಿನ ತಳಿಗೆ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮಾವು ಬೆಳೆಗಾರ

'ಮಾವಿನ ಸಸಿ'ಗಳನ್ನು ಕಸಿ ಮಾಡುವ ಮೂಲಕ ಹೊಸ ತಳಿಗಳನ್ನು ರೂಪಿಸುವುದರಲ್ಲಿ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಮಾವು ಬೆಳೆಗಾರ ತಾವು ಅಭಿವೃದ್ಧಿ ಪಡಿಸಿರುವ ಹೊಸ ತಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದಾರೆ. ಹಾಜಿ ಕಲೀಮುಲ್ಲಾ ಎಂಬುವವರು, ಕೋಲ್ಕತ್ತಾ ಹಾಗೂ ಉತ್ತರ...

ಆಜಂ ಖಾನ್ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್: ವಿದ್ಯಾರ್ಥಿ ಬಂಧನ

'ಉತ್ತರ ಪ್ರದೇಶ' ಸಚಿವ ಆಜಂ ಖಾನ್ ವಿರುದ್ಧ ಫೇಸ್ ಬುಕ್ ನಲ್ಲಿ ಕಾಮೆಂಟಿಸಿದ್ದಕ್ಕೆ ಪ್ರಥಮ ಪಿಯುಸಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಬರೇಲಿ ಜಿಲ್ಲೆಯ ವಿಕಿ ಖಾನ್ ಎಂಬ ವಿದ್ಯಾರ್ಥಿ ವಿರುದ್ಧ ಆಜಂ ಖಾನ್ ಆಪ್ತ ಫಸಾಹತ್ ಅಲಿ ಖಾನ್ ಮಾ.15ರಂದು ದೂರು...

ಮತಾಂತರದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷ್ಯ ವಹಿಸಿದೆ: ಕಾಂಗ್ರೆಸ್

'ಮತಾಂತರ'ದ ವಿಷಯ ಉತ್ತರ ಪ್ರದೇಶದ ವಿಧಾನಸಭೆಯಲ್ಲೂ ಚರ್ಚೆಗೆ ಬಂದಿದೆ. ಫೆ.23ರ ವಿಧಾನಸಭಾ ಕಲಾಪದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉತ್ತರ ಪ್ರದೇಶ ಸರ್ಕಾರ ಮತಾಂತರವನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದೆ. ಕಳೆದ ವರ್ಷದ ಕೊನೆ 5 ತಿಂಗಳಲ್ಲಿ...

ಸಚಿವ ಆಜಂ ಖಾನ್ ಸಾಂವಿಧಾನ ಚೌಕಟ್ಟನ್ನು ಉಲ್ಲಂಘಿಸುತ್ತಿದ್ದಾರೆ: ಯುಪಿ ರಾಜ್ಯಪಾಲ

'ಉತ್ತರ ಪ್ರದೇಶ'ದ ಸಚಿವ ಆಜಂ ಖಾನ್ ವಿರುದ್ಧ ರಾಜ್ಯಪಾಲ ರಾಮ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಆಜಂ ಖಾನ್ ಸಾಂವಿಧಾನಿಕ ಚೌಕಟ್ಟನ್ನು ಉಲ್ಲಂಘಿಸಿ ಸಂವಿಧಾನದ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಆಜಂ ಖಾನ್ ಉತ್ತರ ಪ್ರದೇಶದಲ್ಲಿ...

ಗೋಹತ್ಯೆ ವಿರುದ್ಧ ಗೂಂಡಾ ಕಾಯ್ದೆ ಜಾರಿ

ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಗೋಹತ್ಯೆ ವಿರುದ್ಧ ಗೂಂಡಾ ಕಾಯ್ದೆಯೊಂದನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ. ಗೋಹತ್ಯೆ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ದಾಖಲು ಮಾಡಲು ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲ ರಾಮ್ ನಾಯ್ಕ್ ಅವರು...

ರಾಮ ಮಂದಿರ ನಿರ್ಮಾಣ: ವಿಶ್ವಹಿಂದೂ ಪರಿಷತ್ ನಿಂದ ದೇಶಾದ್ಯಂತ ರಾಮಮಹೋತ್ಸವ ಆಯೋಜನೆ

'ಅಯೋಧ್ಯೆ'ಯಲ್ಲಿ ರಾಮ ಮಂದಿರ ನಿರ್ಮಿಸುವ ಸಂಬಂಧ ವಿಶ್ವಹಿಂದೂ ಪರಿಷತ್ ಸಂಘಟನೆ, ದೇಶಾದ್ಯಂತ ರಾಮ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಮಾರ್ಚ್ 21ಅಥವಾ 22ರಿಂದ ದೇಶಾದ್ಯಂತ ರಾಮ ಮಹೋತ್ಸವ ಪ್ರಾರಂಭವಾಗಲಿದ್ದು ಏಪ್ರಿಲ್ 1 ವರೆಗೆ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ನ...

ಅಯೋಧ್ಯೆಯ ರಾಮ್ ಲಲ್ಲಾ ಮಂದಿರದಿಂದ ಯುಪಿ ಸರ್ಕಾರಕ್ಕೆ 300ಕೋಟಿ ರೂಪಾಯಿ ಆದಾಯ!

ಉತ್ತರ ಪ್ರದೇಶದ ಸರ್ಕಾರಕ್ಕೆ ರಾಮಭಕ್ತರಿಂದ ಬರೋಬ್ಬರಿ 300 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಅಯೋಧ್ಯೆಗೆ ಭೇಟಿ ನೀಡುವ ಭಕ್ತಾದಿಗಳಿಂದ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ಇಷ್ಟೊಂದು ಬೃಹತ್ ಮೊತ್ತದ ಹಣ ಜಮಾವಣೆಯಾಗಿದೆ. ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್...

ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು: ಯುಪಿ ರಾಜ್ಯಪಾಲ ರಾಮ್ ನಾಯ್ಕ್

'ಇಂಗ್ಲೀಷ್ ಭಾಷೆ'ಯನ್ನು ಪ್ರಾಥಮಿಕವಾಗಿ ಕಲಿಸುವುದನ್ನು ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ವಿರೋಧಿಸಿದ್ದು, ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೇ ಇಂಗ್ಲೀಷ್ ಕಲಿಕೆಗೆ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಮ್ ನಾಯ್ಕ್, ವಿದ್ಯಾರ್ಥಿಗಳ ತಿಳುವಳಿಕೆ ಪಕ್ವವಾದ...

ರಾಮಮಂದಿರಗಳನ್ನು ಭಾರತದಲ್ಲಲ್ಲದೇ ಮತ್ತೆಲ್ಲಿ ನಿರ್ಮಿಸಲು ಸಾಧ್ಯ: ಸಂಸದ ಮುನವ್ವಾರ್ ಸಲೀಂ

'ಉತ್ತರ ಪ್ರದೇಶ'ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಸಮಾಜವಾದಿ ಪಕ್ಷದ ಸಂಸದ ಚೌಧರಿ ಮುನವ್ವಾರ್ ಸಲೀಮ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಸಲೀಮ್, ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ...

ಗೌರವ ಡಾಕ್ಟರೇಟ್ ನಿರಾಕರಿಸಿದ ಉತ್ತರ ಪ್ರದೇಶ ಸಿ.ಎಂ ಅಖಿಲೇಶ್ ಯಾದವ್

'ಉತ್ತರ ಪ್ರದೇಶ' ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮಗೆ ನೀಡಲು ಉದ್ದೇಶಿಸಲಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದಾರೆ. ಉತ್ತರ ಪ್ರದೇಶ ತಾಂತ್ರಿಕ ವಿಶ್ವವಿದ್ಯಾನಿಲಯ (ಯುಟಿಪಿಯು) ಯುಟಿಪಿಯು ಜನವರಿ 12ರಂದು ನಡೆಯುವ ಘಟಿಕೋತ್ಸವದಲ್ಲಿ ಸಿ ಎಂ ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ಉದ್ದೇಶಿಸಿತ್ತು....

ಉತ್ತರ ಪ್ರದೇಶವಾಯ್ತು, ಬಿಹಾರದಲ್ಲೂ ಪಿಕೆಗೆ ತೆರಿಗೆ ವಿನಾಯಿತಿ ಘೋಷಣೆ

ದೇಶಾದ್ಯಂತ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪಿಕೆ ಚಿತ್ರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಹಾರದ ಮಾಜಿ ಸಿ.ಎಂ ನಿತೀಶ್ ಕುಮಾರ್ ಶ್ಲಾಘನೆ ವ್ಯಪಡಿಸಿದ್ದಾರೆ. ಮಾಜಿ ಸಿ.ಎಂ ನಿತೀಶ್ ಕುಮಾರ್, ಪಿಕೆ ಚಿತ್ರದ ಬಗ್ಗೆ ಮೆಚ್ಚುಗೆ...

ಪಿಕೆ ಸಿನಿಮಾಗೆ ಅಖಿಲೇಶ್ ಯಾದವ್ ಮೆಚ್ಚುಗೆ: ಮನರಂಜನಾ ತೆರಿಗೆ ವಿನಾಯಿತಿ

ದೇಶಾದ್ಯಂತ ಪಿಕೆ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಿಕೆ ಚಿತ್ರವನ್ನು ಉತ್ತಮ ಪ್ರೇರಣಾತ್ಮಕ ಚಿತ್ರ ಎಂದು ಬಣ್ಣಿಸಿದ್ದಾರೆ. ಪಿಕೆ ಉತ್ತಮ ಮೌಲ್ಯಗಳನ್ನು ಹೊಂದಿರುವ ಚಿತ್ರ ಆದ್ದರಿಂದ ರಾಜ್ಯದಲ್ಲಿ ಪಿಕೆ ಚಿತ್ರಕ್ಕೆ ಮನರಂಜನಾ ತೆರಿಗೆಯನ್ನು ಮುಕ್ತಗೊಳಿಸಲಿದ್ದೇವೆ ಎಂದು...

ಗುಜರಾತ್ ನಲ್ಲಿಯೂ ಘರ್ ವಾಪಸಿ ಮೂಲಕ 225 ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ವಾಪಸ್

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಮೂಲಕ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ವಿಶ್ವಹಿಂದೂ ಪರಿಷತ್, ಈಗ ಪ್ರಧಾನಿ ಮೋದಿ ರಾಜ್ಯವಾದ ಗುಜರಾತ್ ನಲ್ಲೂ 225 ಬುಡಕಟ್ಟು ಕ್ರಿಶ್ಚಿಯನ್ ರನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ ಎಂದು ಹೇಳಿದೆ. ಬುಡಕಟ್ಟು ಕ್ರಿಶ್ಚಿಯನ್...

ಮತಾಂತರ ನಿಷೇಧ ಕಾಯ್ದೆಗೆ ಸೆಕ್ಯುಲರ್ ಪಕ್ಷಗಳು ಬೆಂಬಲಿಸಲಿ: ಅಮಿತ್ ಶಾ

ಒತ್ತಾಯ ಪೂರ್ವಕ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಲವಂತದ ಮತಾಂತರಕ್ಕೆ ಬಿಜೆಪಿಯ ವಿರೋಧವಿದ್ದು, ನಿಜವಾದ ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಭಾರತದ ಎಲ್ಲಾ ಪಕ್ಷಗಳು ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ...

ಘರ್ ವಾಪಸಿ ಮೂಲಕ ದಾರಿ ತಪ್ಪಿದವರನ್ನು ವಾಪಸ್ ಕರೆತರಲಾಗುತ್ತಿದೆ: ಮೋಹನ್ ಭಾಗವತ್

'ಉತ್ತರ ಪ್ರದೇಶ'ದಲ್ಲಿ ಇತ್ತೀಚೆಗಷ್ಟೆ ನಡೆದಿದ್ದ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಭಾರತ ಹಿಂದೂ ರಾಷ್ಟ್ರ ಇಲ್ಲಿರುವ ಹಿಂದೂಗಳು ಇಲ್ಲೇ ಹುಟ್ಟಿ ಬದುಕುತ್ತಿದ್ದಾರೆ ಅವರು ಎಲ್ಲಿಂದಲೋ ಬಂದವರಲ್ಲ ಎಂದು ಹೇಳಿದ್ದಾರೆ. ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್...

ಘರ್ ವಾಪಸಿ ಶಾಂತಿಗೆ ಮಾರಕ, ಮತಾಂತರ ನಿಷೇಧ ಕಾಯ್ದೆ ಮಾತ್ರ ಬೇಡ: ದೆಹಲಿ ಬಿಷಪ್

'ಆರ್.ಎಸ್.ಎಸ್' ನ ಘರ್ ವಾಪಸಿ ಬಗ್ಗೆ ದೆಹಲಿಯ ಪ್ರಧಾನ ಬಿಷಪ್ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶದಲ್ಲಿ ನಡೆದಿರುವ ಮಾತೃಧರ್ಮಕ್ಕೆ ವಾಪಸ್ಸಾಗುವ ಕಾರ್ಯಕ್ರಮ ಶಾಂತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯ ವಿರುದ್ಧವಾಗಿದೆ ಎಂದು ಬಿಷಪ್ ತಿಳಿಸಿದ್ದಾರೆ....

ಡಿ.25ರಂದು ನಡೆಯಬೇಕಿದ್ದ ಘರ್ ವಾಪಸಿ ಕಾರ್ಯಕ್ರಮ ರದ್ದು

ಪಶ್ಚಿಮ ಉತ್ತರ ಪ್ರದೇಶದಲ್ಲಿ ಧರ್ಮ ಜಾಗರಣ ಸಮಿತಿ ಡಿ.25ರಂದು ನಡೆಸಲು ಉದ್ದೇಶಿಸಲಾಗಿದ್ದ ಸಾಮೂಹಿಕ ಮರು ಮತಾಂತರ ಕಾರ್ಯಕ್ರಮವನ್ನು ನಡೆಸದೇ ಇರಲು ತೀರ್ಮಾನಿಸಿದೆ. ಈ ಬಗ್ಗೆ ಪಿಟಿಐ ಗೆ ಸ್ಪಷ್ಟನೆ ನೀಡಿರುವ ಧರ್ಮ ಜಾಗರಣ ಸಮಿತಿ ಮುಖ್ಯಸ್ಥ, ಡಿ.25ರಂದು ನಡೆಸಬೇಕಿದ್ದ ಘರ್ ವಾಪಸಿ...

ಮರುಮತಾಂತರದ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ: ಕಾಂಗ್ರೆಸ್

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ನಡೆದ ಮರುಮತಾಂತರದ ವಿಷಯದ ಬಗ್ಗೆ ಸಂಸತ್ ನಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಗದ್ದಲ ಮುಂದುವರೆಸಿವೆ. ಮರುಮತಾಂತರದ ಬಗ್ಗೆ ಕೋಲಾಹಲ ಸೃಷ್ಠಿಸಿರುವ ಸಂಸತ್ ಸದಸ್ಯರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ....

ಭಾರತದಲ್ಲಿ ನಡೆಯುತ್ತಿರುವ ಮರುಮತಾಂತರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಅಮೆರಿಕ

ಭಾರತದಲ್ಲಿ ನಡೆಯುತ್ತಿರುವ ಸಾಮೂಹಿಕ ಮತಾಂತರದ ವಿಷಯವನ್ನು ಗಮನಿಸುತ್ತಿರುವುದಾಗಿ ಅಮೆರಿಕಾ ತಿಳಿಸಿದೆ. ಭಾರತದಲ್ಲಿ ಸಾಮೂಹಿಕ ಮರುಮತಾಂತರದ ವರದಿಗಳ ಬಗ್ಗೆ ಅರಿವಿದೆ. ಇಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಮೆರಿಕಾ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ಹೇಳಿಕೆ ನೀಡಿದ್ದಾರೆ. ಜಗತ್ತಿನ ಎಲ್ಲಾ ದೇಶಗಳಲ್ಲಿರುವ ಧರ್ಮ ಮತ್ತು...

ಉತ್ತರ ಪ್ರದೇಶದಲ್ಲಿ 27 ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರ

'ಉತ್ತರ ಪ್ರದೇಶ'ದಲ್ಲಿ 57 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾದ ಬೆನ್ನಲ್ಲೇ ಕ್ರಿಶ್ಚಿಯನ್ ಮಿಷನರಿಗಳು ಉತ್ತರ ಪ್ರದೇಶದಲ್ಲಿ 27 ಜನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಿದ್ದಾರೆ. ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಪ್ರಕಾರ, ಉತ್ತರ ಪ್ರದೇಶದ ಕುಷಿನಗರದಲ್ಲಿ...

ಹಿಂದೂ ಧರ್ಮಕ್ಕೆ ಮರುಮತಾಂತರ: ಉತ್ತರ ಪ್ರದೇಶ ಪೊಲೀಸರಿಂದ ಓರ್ವನ ಬಂಧನ

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂದಕಿಶೋರ್ ವಾಲ್ಮೀಕಿ ಎಂಬುವವರನ್ನು ಬಂಧಿಸಿದ್ದಾರೆ. ಡಿ.16ರಂದು ಬಂಧಿಸಲಾಗಿರುವ ನಂದಕಿಶೋರ್ ವಿರುದ್ಧ ಒತ್ತಾಯಪೂರ್ವಕ ಮತಾಂತರ ನಡೆಸಿರುವ ಆರೋಪವಿದ್ದು ಎಫ್.ಐ.ಆರ್ ದಾಖಲಿಸಲಾಗಿದೆ....

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ: ಪೊಲೀಸ್ ಇಲಾಖೆ

'ಉತ್ತರ ಪ್ರದೇಶ'ದಲ್ಲಿ ಡಿ.25ರಂದು ನಡೆಯಲಿರುವ ಸಾಮೂಹಿಕ ಮರು ಮತಾಂತರ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಧರ್ಮ ಜಾಗರಣ ಮಂಚ್ ಹಾಗೂ ಭಜರಂಗದಳ ಸಂಘಟನೆ ಉತ್ತರ ಪ್ರದೇಶದಲ್ಲಿ ಡಿ.25ರಂದು 5 ಸಾವಿರ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಸಮುದಾಯದವರನ್ನು...

ಸೋನಿಯಾ ಗಾಂಧಿ ಕ್ಷೇತ್ರದಲ್ಲಿ ಘರ್ ವಾಪಸಿ ಕಾರ್ಯಕ್ರಮ ನಡೆಸಲಿರುವ ವಿಶ್ವಹಿಂದೂ ಪರಿಷತ್

'ಹಿಂದೂ ಧರ್ಮ'ದಿಂದ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದವರನ್ನು ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಿಂದ ತೀವ್ರ ವಿರೋಧವಾಗುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲೇ ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ರಾಯ್...

ರಾಮ ಮಂದಿರ ನಿರ್ಮಾಣವಾಗಬೇಕೆಂದ ಯುಪಿ ರಾಜ್ಯಪಾಲರ ವಿರುದ್ಧ ವಿಪಕ್ಷಗಳ ಆಕ್ರೋಶ

ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಹೇಳಿಕೆ ನೀಡಿದ್ದ ರಾಜ್ಯಪಾಲ ರಾಮ್ ನಾಯ್ಕ್ ವಿರುದ್ಧ ಸಂಸತ್ ನಲ್ಲಿ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಡಿ.12ರ ಸಂಸತ್ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ರಾಮ್ ನಾಯ್ಕ್ ವಿರುದ್ಧ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳು, ರಾಮಮಂದಿರ ನಿರ್ಮಾಣವಾಗಬೇಕೆಂದು ಹೇಳಿಕೆ...

ರೇಪ್ ಪ್ರಕರಣ: ಯೂಬರ್ ಕ್ಯಾಬ್ ಚಾಲಕನಿಗೆ 14 ದಿನ ನ್ಯಾಯಾಂಗ ಬಂಧನ

ಎಂ.ಎನ್.ಸಿ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರವೆಸಗಿರುವ ಯೂಬರ್ ಕ್ಯಾಬ್ ಚಾಲಕ ಶಿವಕುಮಾರ್ ಯಾದವ್‌ ನನ್ನು ದೆಹಲಿ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅತ್ಯಾಚಾರದ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಶಿವಕುಮಾರ್ ಯಾದವ್‌ ನನ್ನು ಡಿ.11ರಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಮೂರ್ತಿ...

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಯುವತಿ: ಮುಜಾಫರ್ ನಗರದಲ್ಲಿ ಪರಿಸ್ಥಿತಿ ಉದ್ವಿಘ್ನ

ಪ್ರೇಮಿಸಿದ ವ್ಯಕ್ತಿಯನ್ನು ವಿವಾಹವಾಗಲೆಂದು ಯುವತಿಯೋರ್ವಳು ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಉತ್ತರ ಪ್ರದೇಶದ ಮುಜಾಫರ್ ನಗರಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈಶ್ವರ್ ಸಿಂಗ್ ಎಂಬಾತನನ್ನು ಪ್ರೀತಿಸಿದ್ದ ಅನ್ಯ ಧರ್ಮೀಯ ಯುವತಿ ನ.3ರಂದು ಆತನೊಂದಿಗೆ ವಿವಾಹವಾಗಿದ್ದಳು, ಈ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಈ...

ಉತ್ತರ ಪ್ರದೇಶದಲ್ಲಿ ಮತಾಂತರ: ಧರ್ಮ ಜಾಗರಣ ಮಂಚ್ ಕಚೇರಿ ಮೇಲೆ ಪೊಲೀಸ್ ದಾಳಿ

'ಉತ್ತರ ಪ್ರದೇಶ'ದಲ್ಲಿ ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಎದುರಿಸುತ್ತಿರುವ ಧರ್ಮ ಜಾಗರಣ ಮಂಚ್ ಮೇಲೆ ಡಿ.11ರಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ...

57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರ: ಸಂಸತ್ ನಲ್ಲಿ ವಿಪಕ್ಷಗಳಿಂದ ಗದ್ದಲ

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದನ್ನು ವಿರೋಧಿಸಿ ಸಂಸತ್ ನಲ್ಲಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿವೆ. ಮುಸ್ಲಿಮರು ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳ...

ಆಗ್ರಾದಲ್ಲಿ 57 ಮುಸ್ಲಿಂ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ಸುಮಾರು 57ಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ಆರ್.ಎಸ್.ಎಸ್ ಹಾಗೂ ಭಜರಂಗದಳ ಹಮ್ಮಿಕೊಂಡಿದ್ದ ಘರ್ ವಾಪಸಿ ಕಾರ್ಯಕ್ರಮದಲ್ಲಿ 57 ಕುಟುಂಬದ 200 ಮುಸ್ಲಿಮರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್.ಎಸ್.ಎಸ್ ನ...

ಮಹಿಳೆಯರ ಅಪಹರಣ ಪ್ರಕರಣ: ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ

ಭಾರತದಲ್ಲಿ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಅಪಹರಣ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಅಂಶ ಬಯಲಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಎಂಬುದು ಗಮನಾರ್ಹ ಅಂಶ. ಸಂಸತ್ ಅಧಿವೇಶನದ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವರಾದ ಹರಿಭಾಯ್ ಪರಥಿಭಾಯ್ ಚೌದರಿ, ಉತ್ತರ ಪ್ರದೇಶ ರಾಜ್ಯದಲ್ಲಿ...

ಜೀನ್ಸ್,ಮೊಬೈಲ್ ಆಯ್ತು, ಈಗ ಸಾಮಾಜಿಕ ಜಾಲತಾಣ ಬಳಕೆಗೂ ಉತ್ತರ ಪ್ರದೇಶ ಪಂಚಾಯತ್ ಕೊಕ್ಕೆ

ಹುಡುಗಿಯರು ಜೀನ್ಸ್ ಹಾಗೂ ಮೊಬೈಲ್ ಬಳಸುವುದಕ್ಕೆ ನಿಷೇಧ ಹೇರಿದ್ದ ಜಾಟ್ ಜನಾಂಗದ ಖಾಪ್ ಪಂಚಾಯಿತಿ, ಈಗ ಸಾಮಾಜಿಕ ಜಾಲತಾಣಗಳಿಂದಲೂ ದೂರವಿರುವಂತೆ ಮಹಿಳೆಯರು/ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದೆ. ಮುಜಾಫರ್ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಟ್ ಸಮುದಾಯದವರು ತಮ್ಮ ಹೆಣ್ಣುಮಕ್ಕಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳನ್ನು ತಡೆಗಟ್ಟಲು...

ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆಗಳ ಬಂಧನ

ಕಾನೂನು ಬಾಹಿರವಾಗಿ ವಾಸಿಸುತ್ತಿದ್ದ 5 ಬಾಂಗ್ಲಾ ದೇಶದ ಪ್ರಜೆಗಳನ್ನು ಉತ್ತರ ಪ್ರದೇಶ ಪೊಲೀಸರು ಅ.29ರಂದು ಬಂಧಿಸಿದ್ದಾರೆ. ಕಳೆದ ಹತ್ತು ವರ್ಷದಿಂದ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ....

ರಾಜ್ಯಪಾಲರಿಗೇ ಎಚ್ಚರಿಕೆ ನೀಡಿದ ಉತ್ತರ ಪ್ರದೇಶ ಸಿ.ಎಂ ಅಖಿಲೇಶ್ ಯಾದವ್

'ಉತ್ತರ ಪ್ರದೇಶ' ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯಪಾಲರಿಗೇ ಎಚ್ಚರಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲ ರಾಮ್ ನಾಯಕ್ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯಪಾಲರಿಗೇ ಎಚ್ಚರಿಕೆ ನೀಡಿದ್ದು, ವ್ಯಾಪ್ತಿ ಮೀರಿ ವರ್ತಿಸದಂತೆ...

ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ:6 ಕಾರ್ಮಿಕರ ಸಾವು

'ಉತ್ತರ ಪ್ರದೇಶ'ದಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ 6 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೆ.20ರಂದು ನಡೆದಿದೆ. ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆಯೇ ಪಟಾಕಿ ಕಾರ್ಖಾನೆಗಳಲ್ಲಿ ಪಟಾಕಿ ತಯಾರಿಕೆ ಎಂದಿಗಿಂತಲೂ ಚುರುಕು ಪಡೆದೆ. ಅಂತೆಯೇ ಉತ್ತರ ಪ್ರದೇಶದಲ್ಲಿಯೂ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ...

ಬಿಜೆಪಿಯ ಅಚ್ಚೆ ದಿನಗಳು ಮುಗಿದಿವೆ: ಅಖಿಲೇಶ್ ಯಾದವ್

'ಬಿಜೆಪಿ'ಯ ಒಳ್ಳೆದಿನಗಳು (ಅಚ್ಚೆ ದಿನ್)ಮುಗಿದಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಸೆ.13ರಂದು ನಡೆದ 3 ಲೋಕಸಭೆ 33 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣಾ ಫಲಿತಾಂಶದಲ್ಲಿ ಉತ್ತರಪ್ರದೇಶ ಉಪಚುನಾವಣೆಯಲ್ಲಿ ಎಸ್‌ಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅಖಿಲೇಶ್...

ಉಪಚುನಾವಣೆ ಫಲಿತಾಂಶ: ಶಿವಸೇನೆಯಿಂದ ಬಿಜೆಪಿಗೆ ನೀತಿ ಪಾಠ

ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ನಲ್ಲಿ ನಡೆದ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ದೊರೆತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಡಿ.ಎ ಮೈತ್ರಿ ಪಕ್ಷ ಶಿವಸೇನೆ,ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು ಎಂದು ಎಚ್ಚರಿಸಿದೆ. ಮುಂಬೈ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಸನಿಹದಲ್ಲೇ...

ಗೋಮಾಂಸ ರಫ್ತಿನ ಲಾಭ ಭಯೋತ್ಪಾದನೆಗೆ ಬಳಕೆ!

ಭಾರತ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ, ಅಕ್ರಮ ಗೋಹತ್ಯೆಯಿಂದ ಬರುತ್ತಿರುವ ಲಾಭವನ್ನು ಉಗ್ರರ ಚಟುವಟಿಕೆಯ ಬೆಳವಣಿಗೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ....

ಒಂದು ವರ್ಷದ ಬಾಲಕನಿಂದ ಶಾಂತಿ ಭಂಗ: ಯುಪಿ ಪೊಲೀಸರ ಯಡವಟ್ ವರದಿ

ಒಂದು ವರ್ಷದ ಹುಡುಗ ಸಮಾಜದಲ್ಲಿ ಶಾಂತಿ ಭಂಗವನ್ನು ಉಂಟುಮಾಡಲು ಸಾಧ್ಯವೆ? ಉತ್ತರ ಪ್ರದೇಶ ಪೊಲೀಸರನ್ನು ಕೇಳಿ ನೋಡಿ ಹೌದು ಎನ್ನುತ್ತಾರೆ! ಉಸ್ಮಾನ್ ಪುರದ ಬಾಲಕ ನಜೀಂ ಹಾಗೂ ಆತನ ತಂದೆ ಯಾಸೀನ್, ಉಪಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗೆ ನುಗ್ಗಿ ದಾಂಧಲೆ ನಡೆಸುವ ಯತ್ನಿಸುವ...

ಎಸ್ ಪಿ ಗೆ ಮುಖಭಂಗ: ಅಮಿತ್ ಶಾ ವಿರುದ್ಧದ ಚಾರ್ಜ್‌ಶೀಟ್‌ ತಿರಸ್ಕೃತ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಾಖಲಾಗಿದ್ದ ಎಫ್.ಐ.ಆರ್ ನ್ನು ಉತ್ತರ ಪ್ರದೇಶದ ನ್ಯಾಯಾಲಯ ತಿರಸ್ಕರಿಸಿದೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮಿತ್‌ ಶಾ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದ ವಿಡಿಯೊ ತುಣುಕನ್ನು ಆಧರಿಸಿ ಮುಜಾಫರ್‌ನಗರ ಪೊಲೀಸರು ನ್ಯಾಯಾಲಯಕ್ಕೆ ಸೆ.10ರಂದು ಚಾರ್ಜ್‌ಶೀಟ್...

ಲವ್ ಜಿಹಾದ್ ನಡೆಸುವುದರಿಂದ ಇಸ್ಲಾಂ ಗೆ ಘೋರ ಅನ್ಯಾಯ : ಸುನ್ನಿ ಮೌಲ್ವಿಗಳ ಹೇಳಿಕೆ

ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವ ಲವ್ ಜಿಹಾದ್ ಬಗ್ಗೆ ಸುನ್ನಿ ಮೌಲ್ವಿಗಳು, ಉತ್ತರ ಪ್ರದೇಶ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ಲವ್ ಜಿಹಾದ್ ನಡೆಸುತ್ತಿರುವ ಮುಸ್ಲಿಮರು ಇಸ್ಲಾಂ ಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲವ್ ಜಿಹಾದ್ ಎಂಬ...

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ನೊಟೀಸ್

ಉಪಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. ನೋಯ್ಡಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಯೋಗಿ ಆದಿತ್ಯನಾಥ್ ಚುನಾವಣಾ ನೀತಿ ಸಂಹಿತೆ...

ಭಾರತಕ್ಕೂ ಕಾಲಿಟ್ಟ ಶಿಯಾ-ಸುನ್ನಿ ಸಮರ: ಅಲ್ ಬಾಗ್ದಾದಿ ತಲೆಗೆ 5 ಕೋಟಿ ರೂ. ಘೋಷಣೆ

'ಇರಾಕ್' ನಲ್ಲಿ ಉಂಟಾಗಿರುವ ಶಿಯಾ ಸುನ್ನಿ ಗಳ ನಡುವಿನ ಸಮರ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದ್ದು ಸುನ್ನಿ ಸಂಘಟನೆ ಮುಖಂಡ ಅಲ್ ಬಾಗ್ದಾದಿ ತಲೆಗೆ ಶಿಯಾ ಸಂಘಟನೆ 5 ಕೋಟಿ ರೂ ಬಹುಮಾನ ಘೋಷಿಸಿದೆ. ಈ ಮೂಲಕ ಭಾರತದಲ್ಲೂ ಶಿಯಾ-ಸುನ್ನಿಗಳ ನಡುವೆ ಘರ್ಷಣೆ...

ಲವ್ ಜಿಹಾದ್ ಪ್ರತಿಭಟಿಸಲು ಯು.ಪಿ ಮಹಾಪಂಚಾಯತ್ ಗೆ ಸಂಗೀತ್ ಸೋಮ್ ಕರೆ

'ಉತ್ತರ ಪ್ರದೇಶ'ದಲ್ಲಿ ಲೋಕಸಭಾ, ವಿಧಾನಸಭಾ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಲವ್ ಜಿಹಾದ್ ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್, ಎಸ್.ಪಿ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಪ್ರದೇಶ ಶಾಸಕ ಸಂಗೀತ್ ಸೋಮ್ ತಾನು ಪ್ರತಿನಿಧಿಸುತ್ತಿರುವ ಮೀರತ್ ವಿಧಾನಸಭಾ ಕ್ಷೇತ್ರದಲ್ಲಿ ಲವ್...

ಕೇರಳದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆಯಲಿದೆ: ಅಮಿತ್ ಶಾ

ಕೆಲವೇ ವರ್ಷಗಳಲ್ಲಿ ಕೇರಳದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆಯಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಬಿಜೆಪಿಗೆ ಕನಿಷ್ಠ ಸೀಟು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಕೊರಗುವ ಅಗತ್ಯವಿಲ್ಲ, ಪಕ್ಷ ಚುನಾವಣೆಯಿಂದ ಚುನಾವಣೆಗೆ ಬಲವರ್ಧನೆಯಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ...

ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಮುಲ್ಲಾಗಳಿಂದ ಇಮ್ರಾನ ಪ್ರಕರಣ ನೆನಪಿಸುವ ಫತ್ವಾ ಜಾರಿ!

2007ರಲ್ಲಿ ಮಾವನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಇಮ್ರಾನ ಪ್ರಕರಣವನ್ನು ನೆನಪಿಸುವವಂತದ್ದೇ ಮತ್ತೊಂದು ಹೇಯ ಕೃತ್ಯ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಮುಜಫರ್ ನಗರದಲ್ಲಿ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಮಹಿಳೆ ಇನ್ನು ಮುಂದೆ ತನ್ನ ಗಂಡನನ್ನು ತನ್ನ ಮಗನಂತೆ ಕಂಡು, ತನ್ನ ಮಾವನನ್ನು ಮದುವೆಯಾಗಬೇಕೆಂದು ಸ್ಥಳೀಯ ಮುಲ್ಲಾಗಳು...

ಲವ್ ಜಿಹಾದ್ ಪದ ಬಳಕೆಗೆ ನಿರ್ಬಂಧ: ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೋರ್ಟ್

'ಲವ್ ಜಿಹಾದ್' ಪದ ಬಳಕೆಗೆ ನಿರ್ಬಂಧ ವಿಧಿಸಿ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ 10 ದಿನಗಳೊಳಗೆ ಉತ್ತರಿಸಲು ಅಲಹಾಬಾದ್ ನ್ಯಾಯಾಲಯ, ಉತ್ತರ ಪ್ರದೇಶ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಲವ್ ಜಿಹಾದ್...

ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಮೇಥಿ ಲೋಕಸಭಾ ಕ್ಷೇತ್ರದ ಜನತೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಸೆ.4ರಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕ್ಷೇತ್ರದ...

ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮಕ್ಕೆ ಮುಸ್ಲಿಂ ಸಂಘಟನೆಗಳ ಒತ್ತಾಯ

'ಉತ್ತರ ಪ್ರದೇಶ' ಗೋರಖ್ ಪುರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಿಲ್ಲತ್ ಬೀದರಿ ಮುಹಿಮ್ ಸಂಘಟನೆ ಒತ್ತಾಯಿಸಿದೆ. ಯೋಗಿ ಆದಿತ್ಯನಾಥ್ ಕೋಮುಪ್ರಚೋದನೆ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂ.ಬಿ.ಎಂ.ಸಿ...

ಲವ್ ಜಿಹಾದ್ ನಿಲ್ಲದಿದ್ದರೆ ಜಿಹಾದಿಗಳಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರ:ಯೋಗಿ ಆದಿತ್ಯನಾಥ್

'ಉತ್ತರ ಪ್ರದೇಶ'ದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಮುಸ್ಲಿಂ ಯುವಕರು ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯರೊಂದಿಗೆ ಪ್ರೀತಿ ನಾಟಕವಾಡಿ ಮೋಸ ಮಾಡುವುದನ್ನು ಬಿಡದೇ ಇದ್ದಲ್ಲಿ ಅವರ ಭಾಷೆಯಲ್ಲೇ ಉತ್ತರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇಂಡಿಯಾ...

ಲವ್ ಜಿಹಾದ್ ಉಪಚುನಾವಣಾ ವಿಷಯವಾಗಲಿದೆ-ಸಂಸದ ಯೋಗಿ ಆದಿತ್ಯನಾಥ್

'ಉತ್ತರ ಪ್ರದೇಶ'ದಲ್ಲಿ ಕಳೆದ ವಾರ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ 'ಲವ್ ಜಿಹಾದ್' ವಿಷಯದ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳದೇ ಇದ್ದರೂ ಸಹ, ವಿಧಾನಸಭಾ, ಲೋಕಸಭಾ ಉಪಚುನಾವಣೆಯಲ್ಲಿ ಲವ್ ಜಿಹಾದ್ ಪ್ರಮುಖ ವಿಷಯವಾಗಲಿದೆ ಎಂದು ಬಿಜೆಪಿ ಸಂಸದ ಯೋಗಿ...

ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ಸಾದ ವಾಲ್ಮೀಕಿಗಳು

ಇತ್ತೀಚಿನ ದಿನಗಳಲ್ಲಿ ಹಲವು ಪ್ರದೇಶದಲ್ಲಿ ಚರ್ಚ್ ಗಳ ಮುಂದೆ ಗರುಡ ಕಂಬ, 'ಕ್ರಿಸ್ತನ ದೇವಾಲಯ'ಎಂಬ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಆಚರಣೆ, ಬೋರ್ಡ್ ಗಳನ್ನು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿ ಚರ್ಚ್ ದೇವಾಲಯವಾಗಿ ಮಾರ್ಪಾಡಾಗಿದ್ದು 1995ರಲ್ಲಿ ಕ್ರಸ್ತ ಮತಕ್ಕೆ ಮತಾಂತರಗೊಂಡಿದ್ದ ಹಿಂದೂಗಳು ಮಾತೃ...

ರಾಜನಾಥ್ ಸಿಂಗ್ ಕುಟುಂಬದ ವಿರುದ್ಧದ ಆರೋಪ ಸುಳ್ಳು: ಅಮಿತ್ ಶಾ

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದು, ರಾಜನಾಥ್ ಸಿಂಗ್ ಅವರ ಕುಟುಂಬ ಅವ್ಯವಹಾರದಲ್ಲಿ ತೊಡಗಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ. ರಾಜನಾಥ್ ಸಿಂಗ್ ಹಾಗೂ ಅವರ ಪುತ್ರ ಪಂಕಜ್ ಸಿಂಗ್ ಅವರ ವಿರುದ್ಧ...

ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರ ನೇಮಕ: ರಾಜ್ಯಕ್ಕೆ ಗುಜರಾತ್ ಸಭಾಧ್ಯಕ್ಷ ರಾಜ್ಯಪಾಲ?

ಅಧಿಕಾರಾವಧಿ ಅಂತ್ಯ, ರಾಜೀನಾಮೆಗಳಿಂದ ತೆರವಾಗಿರುವ ನಾಲ್ಕು ರಾಜ್ಯಗಳ ರಾಜ್ಯಪಾಲರ ಹುದ್ದೆಗೆ ಆ.26ರಂದು ನೂತನ ರಾಜ್ಯಪಾಲರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳಿಂದ ಮಾಹಿತಿ ದೊರೆತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ರಾಜಸ್ಥಾನ ರಾಜ್ಯಗಳ ನೂತನ ರಾಜ್ಯಪಾಲರ ಪಟ್ಟಿಗೆ...

ಯು.ಪಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ ಲವ್ ಜಿಹಾದ್ ತಡೆ ಪ್ರಮುಖ ಅಂಶ

'ಉತ್ತರ ಪ್ರದೇಶ'ದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಲವ್ ಜಿಹಾದ್ ಹಾಗೂ ಮತಾಂತರದ ವಿಷಯಗಳನ್ನು ಪ್ರಮುಖವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ. ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲವ್ ಜಿಹಾದ್, ಮತಾಂತರ ಪ್ರಕರಣಗಳಿಗೆ ಕಡಿವಾಣ ಹಾಕುವ ಬಗ್ಗೆ ಮಥುರಾದಲ್ಲಿ ನಡೆಯಲಿರುವ ಬಿಜೆಪಿ...

ಎಸ್.ಪಿ ಸೇರುವುದಿಲ್ಲ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್

ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ಪುನಃ ಸಮಾಜವಾದಿ ಪಕ್ಷ ಸೇರ್ಪಡೆಗೊಳ್ಳುವುದರ ಬಗ್ಗೆ ಬಿತ್ತರವಾಗುತ್ತಿದ್ದ ವರದಿಗಳನ್ನು ನಿರಾಕರಿಸಿದ್ದಾರೆ. ಮತ್ತೆ ಸಮಾಜವಾದಿ ಪಕ್ಷ ಸೇರುವುದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆ.19ರಂದು ಅಮರ್ ಸಿಂಗ್ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿದ್ದ...

ಬಿ.ಎಸ್.ಪಿ ಜತೆ ಕೈಜೋಡಿಸಲು ಎಸ್.ಪಿ ಸಿದ್ಧ: ಮುಲಾಯಂ ಸಿಂಗ್

ಉತ್ತರ ಪ್ರದೇಶದಲ್ಲಿ ಬಿ.ಎಸ್.ಪಿ ಜತೆ ಕೈಜೋಡಿಸಲು ಸಮಾಜವಾದಿ ಪಕ್ಷ ಸಿದ್ಧವಿದೆ ಎಂದು ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಸಬೇಕಾದರೆ ಸಮಾಜವಾದಿ ಪಕ್ಷ ಮತ್ತು ಬಿ.ಎಸ್.ಪಿ ಮೈತಿಮಾಡಿಕೊಳ್ಳಬೇಕು ಎಂದು ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿಕೆ...

ಕಾಂಗ್ರೆಸ್ ನಲ್ಲಿ ಉನ್ನತ ಹುದ್ದೆ ವದಂತಿ: ಪ್ರಿಯಾಂಕಾ ಗಾಂಧಿ

ತಾವು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿ ಉನ್ನತ ಹುದ್ದೆ ವಹಿಸಿಕೊಳ್ಳುವ ಮಾಧ್ಯಮಗಳ ವರದಿ ನಿರಾಧಾರ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ನನಗೆ ಉನ್ನತ ಹುದ್ದೆ ಸಿಗಬಹುದು ಎಂಬ ವರದಿಗಳು ಸಂಪೂರ್ಣ...

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ತಡೆಗಟ್ಟಲು ರಕ್ಷಾಬಂಧನದ ಜಾಥ

'ಉತ್ತರ ಪ್ರದೇಶ'ದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಲವ್ ಜಿಹಾದ್ ಗೆ ಕಡಿವಾಣ ಹಾಕಲು ಆರ್.ಎಸ್.ಎಸ್ ಕಾರ್ಯತಂತ್ರ ರೂಪಿಸಿದೆ. ರಕ್ಷಾಬಂಧನದ ಮೂಲಕ ಪಶ್ಚಿಮ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನ್ನು ತಡೆಗಟ್ಟಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೀರ್ಮಾನಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಸೂಕ್ಷ್ಮ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited